ಸೋನಿ ಎರಿಕ್‌ಸನ್
ಈ articleಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (July 2009) |
SonyEricsson | |
ಸಂಸ್ಥೆಯ ಪ್ರಕಾರ | Joint venture |
---|---|
ಸ್ಥಾಪನೆ | October 1, 2001[೧] |
ಮುಖ್ಯ ಕಾರ್ಯಾಲಯ | Hammersmith, ಲಂಡನ್, United Kingdom |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) | Carl-Henric Svanberg (Chairman) Bert Nordberg (President) Anders Runevad (EVP) |
ಉದ್ಯಮ | Telecommunications |
ಉತ್ಪನ್ನ | Mobile phones Mobile music devices Wireless systems Wireless voice devices Hi-Tech accessories Wireless data devices |
ಆದಾಯ | €೬.೭೮೮ billion (೨೦೦೯)[೨] |
ನಿವ್ವಳ ಆದಾಯ | -€೮೩೬ million (೨೦೦೯) |
ಉದ್ಯೋಗಿಗಳು | ೮,೪೫೦ (as of April ೨೦೧೦)[೩] |
ಪೋಷಕ ಸಂಸ್ಥೆ | Sony Corporation (೫೦%) Ericsson AB (೫೦%) |
ಜಾಲತಾಣ | SonyEricsson.com |
ಸೋನಿ ಎರಿಕ್‌ಸನ್ ಎಂಬುದು ಜಪಾನೀ/ಸ್ ಬಳಕೆದಾರ/ಉಪಭೋಗೀ ವಿದ್ಯುನ್ಮಾನ ಕಂಪೆನಿ ಸೋನಿ ಕಾರ್ಪೋರೇಷನ್ ಹಾಗೂ ಸ್ವೀಡಿಷ್ ದೂರಸಂಪರ್ಕ/ಸಂವಹನ ಕಂಪೆನಿ Ericsson ಇವೆರಡೂ ಕಂಪೆನಿಗಳು ಸಂಚಾರಿ ದೂರವಾಣಿಗಳನ್ನು ತಯಾರಿಸುವ ಜಂಟಿ ಉದ್ಯಮವನ್ನು ಅಕ್ಟೋಬರ್ ೧, ೨೦೦೧[೧] ರಂದು ಸ್ಥಾಪಿಸಿದವು. ಸೋನಿ'ಯ ಬಳಕೆದಾರ/ಉಪಭೋಗೀ ವಿದ್ಯುನ್ಮಾನ ನೈಪುಣ್ಯತೆಯನ್ನು ಎರಿಕ್‌ಸನ್'ನ ಸಂಪರ್ಕ/ಸಂವಹನ ಕ್ಷೇತ್ರ/ವಲಯದಲ್ಲಿನ ತಂತ್ರಜ್ಞಾನ ಕೌಶಲ್ಯದ ನಾಯಕತ್ವವನ್ನು ಜೊತೆಗೂಡಿಸಿ ಉತ್ತಮ ಉತ್ಪನ್ನವನ್ನು ನೀಡುವುದು ಈ ಯೋಜನೆಯ ಹಿಂದಿನ ಉದ್ದೇಶವೆಂದು ಹೇಳಲಾಗಿದೆ. ಎರಡೂ ಕಂಪೆನಿಗಳು ತಮ್ಮ ಸ್ವಂತ ಸಂಚಾರಿ ದೂರವಾಣಿಗಳ ತಯಾರಿಕೆಯನ್ನು ನಿಲ್ಲಿಸಿವೆ.
ಕಂಪೆನಿ'ಯ ಜಾಗತಿಕ ನಿರ್ವಹಣಾ ಮಂಡಳಿಯು ಯುನೈಟೆಡ್ ಕಿಂಗ್‌ಡಮ್‌ನಲ್ಲಿನ ಲಂಡನ್ ನಗರದ ಹ್ಯಾಮರ್‌ಸ್ಮಿತ್ ಪ್ರದೇಶ ಮೂಲದ್ದಾಗಿದೆಯಲ್ಲದೇ, ಅದರ ಸಂಶೋಧನಾ &/ಮತ್ತು ಅಭಿವೃದ್ಧಿ ತಂಡಗಳು ಸ್ವೀಡನ್, ಜಪಾನ್, ಚೀನಾ, ಜರ್ಮನಿ, ಯುನೈಟೆಡ್ ಸ್ಟೇಟ್ಸ್, ಭಾರತ ಹಾಗೂ ಯುನೈಟೆಡ್ ಕಿಂಗ್‌ಡಮ್‌ಗಳಲ್ಲಿವೆ. ೨೦೦೯ರ ಹಾಗೆ, Nokia, Samsung ಹಾಗೂ LGಗಳ ನಂತರ ಇದು ವಿಶ್ವದಲ್ಲೇ ನಾಲ್ಕನೇ-ಅತಿದೊಡ್ಡ ಸಂಚಾರಿ ದೂರವಾಣಿ ತಯಾರಕ ಸಂಸ್ಥೆಯಾಗಿದೆ.[೪] ಈ ಉತ್ಪನ್ನಗಳ ಮಾರಾಟವು Sony'ಯ ಜನಪ್ರಿಯ ವಾಕ್‌ಮನ್ ಹಾಗೂ ಸೈಬರ್-ಷಾಟ್ ಸರಣಿಗಳ ಅಳವಡಿಕೆಗಳ ಪರಿಕ್ರಮದಿಂದ ಬಹುಮಟ್ಟಿಗೆ ಹೆಚ್ಚಿತು.
ಇತ್ತೀಚಿನ ಸಾಧನೆ
[ಬದಲಾಯಿಸಿ]ಇತ್ತೀಚೆಗೆ ಸೋನಿ ಎರಿಕ್‌ಸನ್ ದೃಢವಾದ ಬೆಳವಣಿಗೆಗೊಳ್ಳುತ್ತಾ ಇರುವ ಹಾಗೆಯೇ, ಅದರ ದಕ್ಷಿಣ ಕೊರಿಯಾದ ಪ್ರತಿಸ್ಪರ್ಧಿ LG ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಅದನ್ನು ಹಿಂದಿಕ್ಕಿತು, ೨೦೦೮ರ Q1ನಲ್ಲಿ ಕಂಪೆನಿ'ಯ ಲಾಭಗಳು ೪೩%ರಷ್ಟು ಗಮನಾರ್ಹವಾದ ಪ್ರಮಾಣದಲ್ಲಿ ಕುಸಿತ ಕಂಡು €೧೩೩ ದಶಲಕ್ಷಕ್ಕೆ (approx. US$ ೧೭೯.೬೬೯೭ ದಶಲಕ್ಷ[೫]), ಇಳಿಕೆಯಾಗಿ, ಮಾರಾಟವು ೮%ರಷ್ಟು ಪ್ರಮಾಣದ ಇಳಿಕೆ ಹಾಗೂ ಮಾರುಕಟ್ಟೆಯ ಪಾಲು ೯.೪%ರಿಂದ ೭.೯%ಕ್ಕೆ ಇಳಿಕೆಯಾದುದರಿಂದ ೨೦೦೮ರಲ್ಲಿ ಹ್ಯಾಂಡ್‌ಸೆಟ್ ಮಾರುಕಟ್ಟೆಯು ೧೦%ರಷ್ಟು ಬೆಳೆಯುವ ಸಾಧ್ಯತೆಯಿರುವಂತಹಾ ಉತ್ತೇಜನಾ ಪರಿಸ್ಥಿತಿಯ ಹೊರತಾಗಿಯೂ ಹೀಗಾಯಿತು. ಸೋನಿ ಎರಿಕ್‌ಸನ್ ೨೦೦೮ರ Q೨ನಲ್ಲಿ ೯೭%ರಷ್ಟು ನಿವ್ವಳ ಲಾಭ ಕುಸಿತ ಕಂಡು, ಜೂನ್ ೨೦೦೮[೬] ರಲ್ಲಿ ಮತ್ತೊಮ್ಮೆ ಲಾಭಕೊರತೆಯ ಎಚ್ಚರಿಕೆಯನ್ನು ಘೋಷಿಸಿತಲ್ಲದೇ ತಾನು ೨,೦೦೦ ಉದ್ಯೋಗಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದು, ತನ್ನ ಹೆಣಗುತ್ತಿರುವ ಪ್ರತಿಸ್ಪರ್ಧಿ Motorolaದೊಂದಿಗೆ ಸೋನಿ ಎರಿಕ್‌ಸನ್, ಕೂಡಾ ಅವಸಾನದ ಅಂಚಿನಲ್ಲಿದೆಯೆಂಬ ವ್ಯಾಪಕ ಭಯವನ್ನು ಹುಟ್ಟುಹಾಕಿತು.[೭] Q೩ನಲ್ಲಿ ಲಾಭದ ಪ್ರಮಾಣವು ಸುಮಾರು ಅಷ್ಟೇ ಇದ್ದಿತಾದರೂ, ಯುನೈಟೆಡ್ ಕಿಂಗ್‌ಡಮ್‌ನಾದ್ಯಂತ ಅಗ್ರ ಮಾರಾಟವನ್ನು ಕಂಡ ಉತ್ಪನ್ನಗಳಲ್ಲೊಂದಾದ C905ನಂತಹಾ ನವೀನ ಮಾದರಿಗಳ ಬಿಡುಗಡೆಯಿಂದಾಗಿ ನವೆಂಬರ್ ಹಾಗೂ ಡಿಸೆಂಬರ್‌ಗಳಲ್ಲಿ ಲಾಭದ ಪ್ರಮಾಣವು ಹೆಚ್ಚತೊಡಗಿತು.
ಸೋನಿ ಎರಿಕ್‌ಸನ್ ಕಂಪೆನಿಯು, ಜುಲೈ ೧೮, ೨೦೦೮ರ ಹಾಗೆ, ಸರಿಸುಮಾರು ೯,೪೦೦ ಉದ್ಯೋಗಿಗಳು ಹಾಗೂ ೨,೫೦೦ ಗುತ್ತಿಗೆದಾರರು/ಉದ್ಯೋಗಿಗಳನ್ನು ವಿಶ್ವದಾದ್ಯಂತ ಹೊಂದಿದೆ. ಬರ್ಟ್ ನಾರ್ಡ್‌ಬರ್ಗ್‌ರು ಕಂಪೆನಿಯ ಅಧ್ಯಕ್ಷರಾಗಿದ್ದಾರೆ . ಆಂಡರ್ಸ್ ರುನೆವಾರ್ಡ್ ಎಂಬುವವರು ಸಾಂಸ್ಥಿಕ ಕಾರ್ಯಕಾರಿ ಉಪಾಧ್ಯಕ್ಷರಾಗಿದ್ದಾರೆ.
ಇತಿಹಾಸ
[ಬದಲಾಯಿಸಿ]ಎರಿಕ್‌ಸನ್'ನ ಸಂಚಾರಿ ದೂರವಾಣಿ ಉದ್ದಿಮೆಯಲ್ಲಿನ ಸಮಸ್ಯೆ/ತೊಡಕುಗಳು
[ಬದಲಾಯಿಸಿ]ಯುನೈಟೆಡ್ ಸ್ಟೇಟ್ಸ್‌ನಲ್ಲಿ, Ericsson ತೊಂಭತ್ತರ ದಶಕದ ಆರಂಭದಲ್ಲಿ ಪ್ರಮುಖವಾಗಿ US ಉಪಸ್ಥಿತಿ ಹಾಗೂ ಬ್ರಾಂಡ್/ವ್ಯಾಪಾರಛಾಪನ್ನು ಸ್ಥಾಪಿಸುವ ಉದ್ದೇಶದಿಂದ ಜನರಲ್ ಎಲೆಕ್ಟ್ರಿಕ್‌ನೊಂದಿಗೆ ಸಹಭಾಗಿತ್ವ ಹೊಂದಿತ್ತು .
Ericsson ನ್ಯೂ ಮೆಕ್ಸಿಕೋದಲ್ಲಿನ ಒಂದು Philips ಸೌಕರ್ಯ ಸಂಸ್ಥೆಯೊಂದಿಗೆ ತನ್ನ ದೂರವಾಣಿಗಳಿಗೆ ಚಿಪ್‌ಗಳನ್ನು ಒಂದೇ ಮೂಲದಿಂದ ಪಡೆಯಲು ನಿರ್ಧರಿಸಿತು. ೨೦೦೦ರ ಮಾರ್ಚ್ ತಿಂಗಳಿನಲ್ಲಿ, Philips ಕಾರ್ಖಾನೆಯಲ್ಲಿ ಉಂಟಾದ ಬೆಂಕಿ ಆಕಸ್ಮಿಕದಿಂದಾಗಿ ಅಲ್ಲಿನ ಕ್ರಿಮಿರಹಿತ ಸೌಕರ್ಯವನ್ನು ಕಲುಷಿತಗೊಳಿಸಿತು. Ericsson ಹಾಗೂ Nokia ಸಂಸ್ಥೆಗಳಿಗೆ (ಅವರ ಮತ್ತೋರ್ವ ಪ್ರಮುಖ ಗ್ರಾಹಕ) ಉತ್ಪಾದನೆಯಲ್ಲಾಗಬಹುದಾದ ವಿಳಂಬವು ಒಂದು ವಾರಕ್ಕಿಂತ ಹೆಚ್ಚಾಗುವುದಿಲ್ಲವೆಂದು ಭರವಸೆಯನ್ನು Philips ನೀಡಿತು. ಉತ್ಪಾದನೆಯು ವಾಸ್ತವವಾಗಿ ತಿಂಗಳುಗಳಷ್ಟು ವಿಳಂಬವಾಗಿ ಆರಂಭಗೊಳ್ಳುವುದು ಸ್ಪಷ್ಟವಾದಾಗ, Ericsson ಗಂಭೀರ/ಗಮನಾರ್ಹ ಕೊರತೆಯನ್ನೆದುರಿಸಬೇಕಾಯಿತು. Nokia ಸಂಸ್ಥೆಯು ಆಗಲೇ ಪರ್ಯಾಯ ಸಂಸ್ಥೆಗಳಿಂದ ಘಟಕಗಳನ್ನು ಪಡೆದುಕೊಳ್ಳಲು ಆರಂಭಿಸಿತ್ತಾದರೂ, ಪ್ರಸ್ತುತ ಮಾದರಿಗಳ ಉತ್ಪಾದನೆ ಹಾಗೂ ನವೀನ ಮಾದರಿಗಳ ಉಪಕ್ರಮವು ಸ್ಥಗಿತಗೊಂಡುದರಿಂದ Ericsson'ನ ಪರಿಸ್ಥಿತಿಯು ಮತ್ತಷ್ಟು ಶೋಚನೀಯವಾಗಿತ್ತು.[೮]
ನಿಸ್ತಂತು/ಸಂಚಾರಿ/ಸೆಲ್ಯುಲರ್ ದೂರವಾಣಿ ಮಾರುಕಟ್ಟೆಯಲ್ಲಿ ದಶಕಗಳ ಕಾಲದಿಂದಲೂ ಇದ್ದ, ಅಲ್ಲದೇ ನಿಸ್ತಂತು/ಸಂಚಾರಿ/ಸೆಲ್ಯುಲರ್ ದೂರವಾಣಿ ಹ್ಯಾಂಡ್‌ಸೆಟ್ ತಯಾರಕ ಸಂಸ್ಥೆಗಳಲ್ಲಿ ವಿಶ್ವದಲ್ಲಿಯೇ no. ೩ ಸ್ಥಾನ ಹೊಂದಿದ್ದ Ericsson ಸಂಸ್ಥೆಯು, ಬೃಹತ್ ನಷ್ಟದೊಂದಿಗೆ ಹೆಣಗಾಡಬೇಕಾಯಿತು. ಇದೆಲ್ಲವಕ್ಕೂ ಪ್ರಮುಖ ಕಾರಣ ಈ ಬೆಂಕಿ ಆಕಸ್ಮಿಕ ಹಾಗೂ Nokiaದಂತೆ ಅಗ್ಗವಾದ ದೂರವಾಣಿಗಳನ್ನು ತಯಾರಿಸಲಾರದ ಅದರ ಅಸಾಮರ್ಥ್ಯ. ಆಗುತ್ತಿರುವ ನಷ್ಟವನ್ನು ತಗ್ಗಿಸಲು, ಕಂಪೆನಿಯು ಉತ್ಪಾದನೆಯನ್ನು ಹ್ಯಾಂಡ್‌ಸೆಟ್‌ಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಬಲ್ಲ ಏಷ್ಯನ್/ಏಷ್ಯಾದ ಕಂಪೆನಿಗಳಿಗೆ ಹೊರಗುತ್ತಿಗೆ ನೀಡುವುದರ ಬಗ್ಗೆ ಚಿಂತಿಸಿತು.[according to whom?]
Ericsson ತನ್ನ ಸಂಚಾರಿ ದೂರವಾಣಿ ವಿಭಾಗವನ್ನು ಮಾರಾಟ ಮಾಡುವ ಸಾಧ್ಯತೆಯ ಬಗ್ಗೆ ಊಹಾಪೋಹಗಳೆದ್ದರೂ ಕಂಪೆನಿ'ಯ ಅಧ್ಯಕ್ಷರು ತಾವು ಹಾಗೆ ಮಾಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ನಿರಾಕರಿಸಿದರು. "ಸಂಚಾರಿ ದೂರವಾಣಿಗಳು ನಿಜವಾಗಲೂ Ericssonನ ಜೀವಾಳ ಉದ್ಯಮವಾಗಿದೆ. ನಮ್ಮಲ್ಲಿ ದೂರವಾಣಿಗಳ ವಿಭಾಗವಿಲ್ಲದಿದ್ದರೆ ನಾವು ಇಷ್ಟರಮಟ್ಟಿಗೆ ಯಶಸ್ವಿಯಾಗಲು (ಜಾಲಗಳಲ್ಲಿ) ಸಾಧ್ಯವಾಗುತ್ತಿರಲಿಲ್ಲ", ಎಂದು ಅವರು ಹೇಳಿದ್ದರು.[ಸೂಕ್ತ ಉಲ್ಲೇಖನ ಬೇಕು]
ಜಂಟಿ ಉದ್ಯಮದ ಹಿನ್ನೆಲೆ
[ಬದಲಾಯಿಸಿ]Sony ವಿಶ್ವದಾದ್ಯಂತದ ಸಂಚಾರಿ ದೂರವಾಣಿ ಮಾರುಕಟ್ಟೆಯಲ್ಲಿ ೨೦೦೦ರಲ್ಲಿ ಪ್ರತಿಶತ ೧ಕ್ಕಿಂತ ಕಡಿಮೆ ಪಾಲನ್ನು ಹೊಂದಿದ್ದು ಕನಿಷ್ಟ ಪ್ರಭಾವೀ ಕಂಪೆನಿಯಾಗಿದೆ. ಈ ಕ್ಷೇತ್ರದಲ್ಲಿ ನಷ್ಟಗಳನ್ನು ಅನುಭವಿಸಿದ್ದಾಗ್ಯೂ, ಅದೇ ಕ್ಷೇತ್ರದಲ್ಲಿ ಹೆಚ್ಚು ಗಮನ ನೀಡಲು ಇಚ್ಛಿಸಿದೆ. ಏಪ್ರಿಲ್ ೨೦೦೧ರಲ್ಲಿ, ಸೋನಿ ಸಂಸ್ಥೆಯು Ericsson ಸಂಸ್ಥೆಯೊಂದಿಗೆ ಹ್ಯಾಂಡ್‌ಸೆಟ್ ಉದ್ಯಮದಲ್ಲಿ ಸಂಭವನೀಯ ಸಹಯೋಗದ ಬಗ್ಗೆ ಮಾತುಕತೆಗಳಲ್ಲಿ ತಾನು ಭಾಗವಹಿಸುತ್ತಿರುವುದನ್ನು ಖಚಿತಪಡಿಸಿತು. ಇದಾಗಿದ್ದು Toshiba ಹಾಗೂ Siemens ಸಂಸ್ಥೆಗಳು ನವೆಂಬರ್ ೨೦೦೦ರಲ್ಲಿ 3G ಸಂಚಾರಿ ಜಾಲಗಳಲ್ಲಿ ಬಳಸುವಂತಹಾ ಹ್ಯಾಂಡ್‌ಸೆಟ್‌ಗಳ ವಿಚಾರದಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸಲು ಚಿಂತಿಸುತ್ತಿರುವ ಬಗೆಗಿನ ೨೦೦೧ರಲ್ಲಿ ರದ್ದುಗೊಂಡ ತಮ್ಮ ಯೋಜನೆಗಳನ್ನು ಘೋಷಿಸಿದ ಸ್ವಲ್ಪ ಕಾಲಾನಂತರ.
ಆಗಸ್ಟ್ ೨೦೦೧ರ ಹೊತ್ತಿಗೆ, ಎರಡೂ ಕಂಪೆನಿಗಳು ಏಪ್ರಿಲ್‌ನಲ್ಲಿ ಘೋಷಿತವಾದ ವಿಲೀನ ಒಪ್ಪಂದದ ಅಂಶಗಳನ್ನು ಅಂತಿಮಗೊಳಿಸಿದವು. ಈ ಕಂಪೆನಿಯು ೩,೫೦೦ ಉದ್ಯೋಗಿಗಳ ಆರಂಭಿಕ ಕಾರ್ಯಪಡೆಯನ್ನು ಹೊಂದುವ ಯೋಜನೆಯಿತ್ತು.
ಆರಂಭಿಕ ತೊಡಕುಗಳು
[ಬದಲಾಯಿಸಿ]ಪ್ರಪ್ರಥಮ ವರ್ಷದಲ್ಲೇ ಲಾಭದಾಯಕವಾಗುವ ಉದ್ದೇಶವನ್ನಿಟ್ಟುಕೊಂಡ ಹೊರತಾಗಿಯೂ, Ericsson'ನ ಮಾರುಕಟ್ಟೆ ಪಾಲು ವಾಸ್ತವವಾಗಿ ಇಳಿಕೆಗೊಂಡುದಲ್ಲದೇ ಆಗಸ್ಟ್ ೨೦೦೨ರಲ್ಲಿ, ವ್ಯವಹಾರವು ಹೀಗೆ ನಿರಾಶಾದಾಯಕವಾಗಿಯೇ ಮುಂದುವರಿದರೆ[ಸೂಕ್ತ ಉಲ್ಲೇಖನ ಬೇಕು], Ericsson ಸಂಚಾರಿ ದೂರವಾಣಿಗಳನ್ನು ತಯಾರಿಸುವುದನ್ನು ತಾನು ಕೈಬಿಡುವುದಾಗಿ ಹಾಗೂ Sonyಯೊಂದಿಗಿನ ಸಹಭಾಗಿತ್ವವನ್ನು ಕೊನೆಗೊಳಿಸುವುದಾಗಿ ಹೇಳಿತ್ತು, Sony ಸಂಸ್ಥೆಯು ಕೂಡಾ ತಾನು ಜಂಟಿ ಉದ್ಯಮದ ಬಗ್ಗೆ ಬದ್ಧತೆಯನ್ನು ಹೊಂದಿರುವುದಾಗಿ ಹಾಗೂ ಹಾಗೂ ಅದನ್ನು ಯಶಸ್ವಿಗೊಳಿಸಲು ಇಚ್ಛಿಸಿರುವುದಾಗಿ ಹೇಳಿಕೆ ನೀಡಿತು. ಆದಾಗ್ಯೂ, ಜನವರಿ ೨೦೦೩ರಲ್ಲಿ, ಉಭಯ ಕಂಪೆನಿಗಳು ನಷ್ಟವನ್ನು ಸರಿದೂಗಿಸಲು ಮಾಡುವ ಯತ್ನದಲ್ಲಿ ತಾವು ಹೆಚ್ಚು ಮೊತ್ತವನ್ನು ಈ ಜಂಟಿ ಯೋಜನೆಯಲ್ಲಿ ತೊಡಗಿಸುವುದಾಗಿ ಹೇಳಿಕೆ ನೀಡಿದವು.[ಸೂಕ್ತ ಉಲ್ಲೇಖನ ಬೇಕು]
ಸೋನಿ ಎರಿಕ್‌ಸನ್'ನ ಕಾರ್ಯನೀತಿಯು ಸಾಂಖ್ಯಿಕ/ಡಿಜಿಟಲ್ ಛಾಯಾಗ್ರಹಣ ಹಾಗೂ ವಿಡಿಯೋ ಕ್ಲಿಪ್‌ಗಳನ್ನು ಇಳಿಸಿಕೊಳ್ಳುವುದು ಹಾಗೂ ನೋಡುವಂತಹಾ ಇನ್ನಿತರ ಬಹುಮಾಧ್ಯಮ ಸೌಲಭ್ಯಗಳಿರುವ ಹಾಗೂ ಖಾಸಗೀ ಮಾಹಿತಿ ನಿರ್ವಹಣಾ ಸೌಲಭ್ಯಗಳಿರುವ ನವೀನ ಮಾದರಿಗಳನ್ನು ಬಿಡುಗಡೆ ಮಾಡುವುದಾಗಿತ್ತು. ಈ ನಿಟ್ಟಿನಲ್ಲಿ, ಸಂಸ್ಥೆಯು ಆ ಅವಧಿಯಲ್ಲಿ ನವನೂತನವೆನಿಸಿದ ಅಂತರ್ನಿವಿಷ್ಟ ಸಾಂಖ್ಯಿಕ/ಡಿಜಿಟಲ್ ಛಾಯಾಗ್ರಾಹಕ ಹಾಗೂ ವರ್ಣಮಯ ಪರದೆಗಳನ್ನು ಹೊಂದಿರುವ ಅನೇಕ ನವೀನ ಮಾದರಿಗಳನ್ನು ಬಿಡುಗಡೆ ಮಾಡಿತು. ಅಂತರ್ನಿವಿಷ್ಟ ಛಾಯಾಗ್ರಾಹಕ ಹಾಗೂ PDA ಸೌಲಭ್ಯಗಳನ್ನು ಹೊಂದಿದ್ದ ಉನ್ನತ-ತಂತ್ರಜ್ಞಾನದ P800 ಮಾದರಿಯು ಯಶಸ್ವಿಯಾದುದಲ್ಲದೇ, ಸಂಸ್ಥೆಯ ಭಾಗ್ಯದ ಬಾಗಿಲನ್ನು ತೆರೆಯುವಲ್ಲಿ ಸಹಾಯ ಮಾಡಿತು.[ಸೂಕ್ತ ಉಲ್ಲೇಖನ ಬೇಕು] ಆದಾಗ್ಯೂ ಜಂಟಿ ಉದ್ಯಮವು, ಏರುಗತಿಯಲ್ಲಿನ ಮಾರಾಟದ ಹೊರತಾಗಿಯೂ ಹೆಚ್ಚಿನ ನಷ್ಟವನ್ನು ಹೊಂದುತ್ತಾ ಸಾಗಿತು. ಪ್ರಥಮ ವರ್ಷದಲ್ಲಿ ಲಾಭವನ್ನು ಪಡೆಯುವ ಅದರ ಗುರಿಯು ೨೦೦೨ಕ್ಕೆ ಮುಂದೆ ಹೋಗಿದ್ದದ್ದು ೨೦೦೩ರಲ್ಲಿ ಮುಂದೆ ಹೋಗಿ ೨೦೦೩ರ ಉತ್ತರ ಭಾಗಕ್ಕೆ ನಿಗದಿಯಾಯಿತು.[ಸೂಕ್ತ ಉಲ್ಲೇಖನ ಬೇಕು]
ಬಹುಮಾಧ್ಯಮ ಹ್ಯಾಂಡ್‌ಸೆಟ್‌ಗಳ ಅಗ್ರ ಮಾರಾಟ ಸಂಸ್ಥೆಯಾಗುವ ತನ್ನ ಧ್ಯೇಯದಲ್ಲಿ ವಿಫಲಗೊಂಡ ಸಂಸ್ಥೆಯು ಐದನೇ ಸ್ಥಾನದಲ್ಲಿಯೇ ಉಳಿದುಕೊಂಡುದಲ್ಲದೇ ೨೦೦೩ರಲ್ಲಿ ಹೆಣಗುತ್ತಿತ್ತು.[ಸೂಕ್ತ ಉಲ್ಲೇಖನ ಬೇಕು]
ಕಾರ್ಯನೀತಿ ಬದಲಾವಣೆ
[ಬದಲಾಯಿಸಿ]ಕಾರ್ಯನೀತಿ ಬದಲಾವಣೆಯ ಆರಂಭ
[ಬದಲಾಯಿಸಿ]ಜೂನ್ ೨೦೦೨ರಲ್ಲಿ, ಸೋನಿ ಎರಿಕ್‌ಸನ್ ಸಂಸ್ಥೆಯು ತಾನು US ಮಾರುಕಟ್ಟೆಯ ಮಟ್ಟಿಗೆ CDMA ಸಂಚಾರಿ ದೂರವಾಣಿಗಳನ್ನು ತಯಾರಿಕೆಯನ್ನು ಸ್ಥಗಿತಗೊಳಿಸಿ ಅಗ್ರ ತಂತ್ರಜ್ಞಾನವಾಗಿ GSMನ ಬಗ್ಗೆ ಹೆಚ್ಚು ಗಮನ ಹರಿಸುವುದಾಗಿ ಹೇಳಿಕೆ ನೀಡಿತು. USA ಹಾಗೂ ಜರ್ಮನಿಗಳಲ್ಲಿನ ಸಂಶೋಧನೆ ಹಾಗೂ ಅಭಿವೃದ್ಧಿ ತಂಡಗಳಲ್ಲಿನ ಉದ್ಯೋಗಗಳ ಸಂಖ್ಯೆಯನ್ನು ಕಡಿತಗೊಳಿಸಿತು ಕೂಡಾ. ಅಕ್ಟೋಬರ್ ೨೦೦೩ರಲ್ಲಿ, ಸಂಸ್ಥೆಯು ತನ್ನ ಪ್ರಪ್ರಥಮ ತ್ರೈಮಾಸಿಕ ಲಾಭವನ್ನು ದಾಖಲಿಸಿದರೂ ದೂರವಾಣಿಗಳ ಬೆಲೆಯಲ್ಲಿನ ಇಳಿಕೆ ಹಾಗೂ ಸ್ಪರ್ಧೆಯು ಲಾಭ ಗಳಿಸುವಂತೆಯೇ ಮುಂದುವರೆಯಲು ಕಷ್ಟಸಾಧ್ಯಗೊಳಿಸಬಹುದು ಎಂದು ಎಚ್ಚರಿಸಿತ್ತು. ಸೋನಿ ಎರಿಕ್‌ಸನ್'ನ ಪುನರ್ಲಾಭ ಗಳಿಕೆಗೆ ಮೂಲ ಕಾರಣ ತನ್ನ ಯಶಸ್ಸು ಎಂಬ ಅಗ್ಗಳಿಕೆಗೆ T610 ಮಾದರಿಯು ಪಾತ್ರವಾಗಿದೆ.[ಸೂಕ್ತ ಉಲ್ಲೇಖನ ಬೇಕು]
ತನ್ನ P೮೦೦ ದೂರವಾಣಿಯ ಯಶಸ್ಸಿನ ನಂತರ, ಸೋನಿ ಎರಿಕ್‌ಸನ್ ಏಕಕಾಲೀನ ವಿದ್ಯಮಾನಗಳಲ್ಲಿ ಲಾಸ್ ವೇಗಾಸ್ ಹಾಗೂ ಬೀಜಿಂಗ್‌ಗಳಲ್ಲಿ ಅಕ್ಟೋಬರ್ ೨೦೦೩ರಲ್ಲಿ P900 ಮಾದರಿಯನ್ನು ಪರಿಚಯಿಸಿತು. ತನ್ನ ಪೂರ್ವವರ್ತಿ ಸಾಧನಕ್ಕಿಂತ ಸಣ್ಣದಾದ, ವೇಗದ, ಸರಳವಾದ ಹಾಗೂ ಹೆಚ್ಚು ನಮ್ಯವಾದದ್ದಾದರಿಂದ ಇದನ್ನು ಸ್ಥಿರಗೊಳಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು]
ಮಾರ್ಚ್ ೨೦೦೪ರಲ್ಲಿ, ಎರಿಕ್‌ಸನ್ ಚುರುಕು ದೂರವಾಣಿಗಳಿಗೆಂದು ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ತಯಾರಿಸಿದ ಉದ್ಯಮ ಒಕ್ಕೂಟವಾದ Symbianನ ನಿಯಂತ್ರಣವನ್ನು ತನ್ನ ಪ್ರತಿಸ್ಪರ್ಧಿ Nokia ಪಡೆದುಕೊಳ್ಳದಿರುವಂತೆ ಮಾಡಲು ಪ್ರಯತ್ನಿಸುವುದಾಗಿ ಹೇಳಿತ್ತು. [ಸೂಕ್ತ ಉಲ್ಲೇಖನ ಬೇಕು]
೨೦೦೪ರಲ್ಲಿ, ಸೋನಿ ಎರಿಕ್‌ಸನ್'ನ ಮಾರುಕಟ್ಟೆ ಪಾಲು ಪ್ರಥಮ ತ್ರೈಮಾಸಿಕದ ಪ್ರತಿಶತ ೫.೬ನಿಂದ ಎರಡನೇ ತ್ರೈಮಾಸಿಕದಲ್ಲಿ[ಸೂಕ್ತ ಉಲ್ಲೇಖನ ಬೇಕು] ಪ್ರತಿಶತ ೭ಕ್ಕೆ ಏರಿಕೆ ಕಂಡಿತು. ಜುಲೈ ೨೦೦೪ರಲ್ಲಿ, ಸೋನಿ ಎರಿಕ್‌ಸನ್ ಅಂತರ್ಗತ ಥಂಬ್‌ಬೋರ್ಡ್, ವ್ಯಾಪಕ ಮಿಂಚಂಚೆ ಬೆಂಬಲ, ನಾಲ್ಮಡಿ ಸ್ಮರಣೆ ಹಾಗೂ ಸುಧಾರಿತ ಪರದೆಗಳೆಲ್ಲವನ್ನೊಳಗೊಂಡ P910 ಕಮ್ಯುನಿಕೇಟರ್/ಸಂವಾಹಕ ಸಾಧನವನ್ನು ಅನಾವರಣಗೊಳಿಸಿತು.
ಫೆಬ್ರವರಿ ೨೦೦೫ರಲ್ಲಿ, ಸೋನಿ ಎರಿಕ್‌ಸನ್ ಅಧ್ಯಕ್ಷ ಮೈಲ್ಸ್ ಫ್ಲಿಂಟ್ 3GSM ವಿಶ್ವ ಸಮ್ಮೇಳನ/ಕಾಂಗ್ರೆಸ್‌ನಲ್ಲಿ ಸೋನಿ ಎರಿಕ್‌ಸನ್ ಸಂಚಾರಿ ದೂರವಾಣಿ/ಸಾಂಖ್ಯಿಕ ಸಂಗೀತ ಸಾಧನವನ್ನು ಮುಂದಿನ ತಿಂಗಳು ಅನಾವರಣಗೊಳಿಸುವುದಾಗಿ ಘೋಷಿಸಿದರು. ಅದನ್ನು ವಾಕ್‌ಮನ್ ದೂರವಾಣಿ ಎಂದು ಕರೆಯಲಾಗುತ್ತದಲ್ಲದೇ, ಆ ಸಾಧನವು MP3 ಹಾಗೂ AAC ಮಾದರಿಯ ಸಂಗೀತ ಕಡತ ಮಾದರಿಗಳನ್ನು ಚಾಲನೆಗೊಳಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು]
ವಾಕ್‌ಮನ್ ಹಾಗೂ ಸೈಬರ್-ಷಾಟ್ ದೂರವಾಣಿಗಳ ಯಶಸ್ಸು
[ಬದಲಾಯಿಸಿ]ಮಾರ್ಚ್ ೧, ೨೦೦೫ರಂದು, ಸೋನಿ ಎರಿಕ್‌ಸನ್ ೨ ಮೆಗಾಪಿಕ್ಸೆಲ್ ಛಾಯಾಗ್ರಾಹಕದ ಸೌಲಭ್ಯದೊಂದಿಗಿನ K750i ಹಾಗೂ ಅದರ ವೇದಿಕೆ/ಪ್ಲಾಟ್‌ಫಾರ್ಮ್ ಸಹಯೋಗಿ ೩೦ ಗಂಟೆಗಳ ಅವಧಿಯ ಸಂಗೀತ ನುಡಿಸುವಿಕೆಯ ಸಾಮರ್ಥ್ಯದ ವಾಕ್‌ಮನ್ ದೂರವಾಣಿಗಳಲ್ಲಿ ಪ್ರಥಮ ಸಾಧನವಾದ W800i, ಹಾಗೂ ಎರಡು ಕನಿಷ್ಟ-ತಂತ್ರಜ್ಞಾನದ ದೂರವಾಣಿಗಳನ್ನು ಪರಿಚಯಿಸಿತು.
೨೦೦೭ರಲ್ಲಿ ಅವರ ಪ್ರಥಮ ೫-ಮೆಗಾಪಿಕ್ಸೆಲ್ ಛಾಯಾಗ್ರಾಹಕ ದೂರವಾಣಿ ಮಾದರಿಯಾದ, ಸೋನಿ ಎರಿಕ್‌ಸನ್ K೮೫೦iಅನ್ನು ಘೋಷಿಸಲಾಯಿತಲ್ಲದೇ, ಮುಂದುವರೆದು ೨೦೦೮ರಲ್ಲಿ ವಿಶ್ವದ ಪ್ರಥಮ ೮-ಮೆಗಾಪಿಕ್ಸೆಲ್ ದೂರವಾಣಿ[ಸೂಕ್ತ ಉಲ್ಲೇಖನ ಬೇಕು]ಯಾದ ಸೋನಿ ಎರಿಕ್‌ಸನ್ C೯೦೫ಅನ್ನು ಘೋಷಿಸಲಾಯಿತು. ೨೦೦೯ರ ಮೊಬೈಲ್ ವರ್ಲ್ಡ್ ಅಧಿವೇಶನ/ಕಾಂಗ್ರೆಸ್‌ನಲ್ಲಿ, ೨೮ ಮೇ ೨೦೦೯ರಂದು ಸ್ಯಾಟಿಯೋ ಎಂಬ ಹೆಸರಿನ ಪ್ರಥಮ ೧೨-ಮೆಗಾಪಿಕ್ಸೆಲ್ ದೂರವಾಣಿ ಮಾದರಿಯನ್ನು ಸೋನಿ ಎರಿಕ್‌ಸನ್ ಅನಾವರಣಗೊಳಿಸಿತು.
ತರುವಾಯ
[ಬದಲಾಯಿಸಿ]ಮೇ ೧, ೨೦೦೫ರಂದು, ಸೋನಿ ಎರಿಕ್‌ಸನ್ ಜಾಗತಿಕ ಪ್ರಶಸ್ತಿಯ ಪ್ರಾಯೋಜಕರಾಗಲು WTA ಟೂರ್ ಪಂದ್ಯಾವಳಿಗೆ ೬ ವರ್ಷಗಳ ಕಾಲಕ್ಕೆ ೮೮ ದಶಲಕ್ಷ US ಡಾಲರ್‌ಗಳ ಮೊತ್ತದ ವ್ಯವಹಾರದ ಮೂಲಕ ಒಪ್ಪಿಗೆ ಸೂಚಿಸಿತು. ಮಹಿಳೆಯರ ವೃತ್ತಿಪರ/ಪ್ರೊ ಟೆನ್ನಿಸ್ ಪ್ರವಾಸೀ ಪಂದ್ಯಾವಳಿಯನ್ನು ಸೋನಿ ಎರಿಕ್‌ಸನ್ WTA ಟೂರ್ ಎಂದು ಮರುನಾಮಕರಣಗೊಳಿಸಲಾಯಿತು. ಕೇವಲ ಒಂದು ತಿಂಗಳ ನಂತರ ಜೂನ್ ೭ರಂದು, ಸಂಸ್ಥೆಯು ವೆಸ್ಟ್ ಇಂಡೀಸ್ ತಂಡದ ದಾಂಡಿಗರು/ಬ್ಯಾಟ್ಸ್‌ಮನ್ನುಗಳಾದ ಕ್ರಿಸ್ ಗೇಲ್ ಹಾಗೂ ರಾಮ್‌ನರೇಶ್ ಸರವಣ್ ಅವರುಗಳ ಪ್ರಾಯೋಜಕತ್ವವನ್ನು ಘೋಷಿಸಿತು.
ಅಕ್ಟೋಬರ್ ೨೦೦೫ರಲ್ಲಿ, ಸೋನಿ ಎರಿಕ್‌ಸನ್ UIQ ೩ರ ಮೇಲೆ ಆಧರಿಸಿದ ಪ್ರಥಮ ಸಂಚಾರಿ ದೂರವಾಣಿಯಾದ P990ಅನ್ನು ಸಾದರಪಡಿಸಿತು.
ಜನವರಿ ೨, ೨೦೦೭ರಂದು, ಸೋನಿ ಎರಿಕ್‌ಸನ್ ಸ್ಟಾಕ್‌ಹೋಮ್‌ನಲ್ಲಿ ತನ್ನ ಸಂಚಾರಿ ದೂರವಾಣಿಗಳಲ್ಲಿ ಕೆಲವನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ ಎಂದು ಘೋಷಿಸಿತು. ತನ್ನ ಎರಡು ಹೊರಗುತ್ತಿಗೆ ಪಾಲುದಾರರಾದ ಫ್ಲೆಕ್ಸ್‌ಟ್ರಾನಿಕ್ಸ್ ಹಾಗೂ ಫಾಕ್ಸ್‌ಕಾನ್‌ಗಳು ಪ್ರತಿ ವರ್ಷಕ್ಕೆ ೧೦ ದಶಲಕ್ಷ ಸಂಚಾರಿ ದೂರವಾಣಿಗಳನ್ನು ೨೦೦೯ರ ಹೊತ್ತಿಗೆ ಉತ್ಪಾದಿಸಲಿವೆ ಎಂದೂ ಘೋಷಿಸಿತು. ಕಂಪೆನಿಯ CEO ಮೈಲ್ಸ್ ಫ್ಲಿಂಟ್ ಭಾರತದ ಸಂಪರ್ಕ/ಸಂವಹನ ಸಚಿವ ದಯಾನಿಧಿ ಮಾರನ್‌ರವರೊಂದಿಗೆ ಚೆನ್ನೈನಲ್ಲಿ ಆಯೋಜಿಸಿದ್ದ ಪತ್ರಿಕಾ ಅಧಿವೇಶನವೊಂದರಲ್ಲಿ ಭಾರತವು ವಿಶ್ವದಲ್ಲೇ ಅತ್ಯಂತ ಹೆಚ್ಚು ಅಭಿವೃದ್ಧಿಗೊಳ್ಳುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದ್ದು ಸೋನಿ ಎರಿಕ್‌ಸನ್‌ಗೆ GSM ಸಂಚಾರಿ ದೂರವಾಣಿಗಳ ೧೦೫ ದಶಲಕ್ಷ ಬಳಕೆದಾರರೊಂದಿಗೆ ಆದ್ಯತಾ ಮಾರುಕಟ್ಟೆಯಾಗಿದೆ ಎಂದು ಘೋಷಿಸಿದರು.
ಫೆಬ್ರವರಿ ೨, ೨೦೦೭ರಂದು, ಸೋನಿ ಎರಿಕ್‌ಸನ್ UIQ ಟೆಕ್ನಾಲಜಿ ಎಂಬ, ಸ್ವೀಡಿಷ್ ತಂತ್ರಾಂಶ ಕಂಪೆನಿಯನ್ನು Symbian Ltd.ನಿಂದ ಸ್ವಾಧೀನಪಡಿಸಿಕೊಂಡಿತು. UIQ ಒಂದು ಸ್ವತಂತ್ರ ಕಂಪೆನಿಯಾಗಿಯೇ ಉಳಿಯಲಿದೆ ಎಂದು, ಮೈಲ್ಸ್ ಫ್ಲಿಂಟ್ ಘೋಷಿಸಿದರು.[೯]
ಅಕ್ಟೋಬರ್ ೧೫, ೨೦೦೭ರಂದು, ಸೋನಿ ಎರಿಕ್‌ಸನ್ ಸಿಂಬಿಯನ್ ಸ್ಮಾರ್ಟ್‌ಫೋನ್ ಷೋ ಕಾರ್ಯಕ್ರಮದಲ್ಲಿ ತಾವು ತಮ್ಮ UIQ ಷೇರುಗಳಲ್ಲಿ ಅರ್ಧದಷ್ಟನ್ನು Motorolaಗೆ ಮಾರಲಿದ್ದೇವೆಂದು ಆ ಮೂಲಕ UIQ ತಂತ್ರಜ್ಞಾನವನ್ನು ಎರಡು ಬೃಹತ್ ಸಂಚಾರಿ ದೂರವಾಣಿ ಕಂಪೆನಿಗಳ ಒಡೆತನದಲ್ಲಿರುವಂತೆ ಮಾಡಲಿದ್ದೇವೆಂದು ಘೋಷಿಸಿತು.
ದೂರವಾಣಿಗಳ ವಿಧಗಳು
[ಬದಲಾಯಿಸಿ]ಪ್ರಮುಖ ಆಸಕ್ತಿಯ ಕ್ಷೇತ್ರಗಳು
[ಬದಲಾಯಿಸಿ]This article may contain an excessive amount of intricate detail that may only interest a specific audience. (January 2010) |
ಸೋನಿ ಎರಿಕ್‌ಸನ್ ಪ್ರಸ್ತುತದಲ್ಲಿ : ಸಂಗೀತ, ಛಾಯಾಗ್ರಾಹಕ, ವ್ಯವಹಾರ ಅನ್ವಯಗಳು (ಜಾಲ ಹಾಗೂ ಮಿಂಚಂಚೆ), ವಿನ್ಯಾಸ, ಸರ್ವಾಂಗೀಣತೆ, ಹಾಗೂ ವೆಚ್ಚ ಕೇಂದ್ರಿತ ದೂರವಾಣಿಗಳ ವಿಧಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸುತ್ತಿದೆ. ಅದರ ಐದು ಅತಿ ದೊಡ್ಡ ವರ್ಗಗಳೆಂದರೆ:
- ವಾಕ್‌ಮನ್-ವ್ಯಾಪಾರ ಛಾಪಿನ ೨೦೦೫ರಲ್ಲಿ ಉಪಕ್ರಮಿಸಲಾದ W ಸರಣಿಯ ಸಂಗೀತಮಯ ದೂರವಾಣಿಗಳು.
ಸೋನಿ ಎರಿಕ್‌ಸನ್ W-ಸರಣಿಯ ಸಂಗೀತಮಯ ದೂರವಾಣಿಗಳು ಪ್ರಪ್ರಥಮ ಸಂಗೀತ-ಕೇಂದ್ರಿತ ಸಂಚಾರಿ ದೂರವಾಣಿಗಳ ಸರಣಿಯಾಗಿದ್ದುದರಿಂದ ಹೆಚ್ಚು ಗಮನ ಸೆಳೆದವಲ್ಲದೇ, ಆ ಸಮಯದಲ್ಲಿ ಸಂಚಾರಿ ಸಂಗೀತ ಸಾಧನಗಳಿಗೆ ರೂಪುಗೊಳ್ಳುತ್ತಿದ್ದ ಸಂಪೂರ್ಣ ನವೀನ ಮಾರುಕಟ್ಟೆಯನ್ನೇ ಸೃಷ್ಟಿಸುವ ಸಂದರ್ಭ ಒದಗಿಸಿತು. ಈ ಎಲ್ಲಾ ವಾಕ್‌ಮನ್ ದೂರವಾಣಿಗಳಲ್ಲಿ ಕಾಣಬಹುದಾದ ಪ್ರಮುಖ ಸೌಲಭ್ಯವೆಂದರೆ, ಅವುಗಳೆಲ್ಲಾ ರಜತವರ್ಣದ 'W' ಬಟನ್ ಅನ್ನು ಒಳಗೊಂಡಿದ್ದು ಅದನ್ನು ಒತ್ತಿದರೆ ಸಂಗೀತ ಕೇಂದ್ರ ಅನ್ವಯವು ತೆರೆಯುವ ಸೌಲಭ್ಯ. ಸೋನಿ ಎರಿಕ್‌ಸನ್'ನ ವಾಕ್‌ಮನ್ ದೂರವಾಣಿಗಳನ್ನು ಈ ಹಿಂದೆ ಪಾಪ್ ತಾರೆಗಳಾದ ಕ್ರಿಸ್ಟಿನಾ ಆಗ್ವಿಲೆರಾ ಹಾಗೂ ಜೇಸನ್ ಕೇ ಯೂರೋಪ್‌ನಾದ್ಯಂತ ವಾಣಿಜ್ಯಕವಾಗಿ ಸ್ಥಿರೀಕರಿಸಿದ್ದರು. - ೨೦೦೬ರಲ್ಲಿ K ಸರಣಿ ದೂರವಾಣಿಗಳ ನವೀನ ಮಾದರಿಗಳಲ್ಲಿ ಸೈಬರ್-ಷಾಟ್-ವ್ಯಾಪಾರ ಛಾಪಿನ ದೂರವಾಣಿಗಳ ಸರಣಿಯನ್ನು ಬಿಡುಗಡೆಗೊಳಿಸಿತು.
ಈ ಸರಣಿಯ ದೂರವಾಣಿಗಳಲ್ಲಿ ದೂರವಾಣಿಯೊಂದಿಗೆ ಅಡಕವಾಗಿರುವ ಛಾಯಾಗ್ರಾಹಕದ ಗುಣಮಟ್ಟದ ಬಗ್ಗೆ ಹೆಚ್ಚು ಗಮನ ನೀಡಲಾಗಿತ್ತು. ಸೈಬರ್-ಷಾಟ್ ದೂರವಾಣಿಗಳು ಯಾವಾಗಲೂ ಫ್ಲಾಷ್/ಪ್ರತಿಫಲಕ ಸೌಲಭ್ಯವನ್ನು ಹೊಂದಿರುತ್ತವಲ್ಲದೇ, ಕೆಲವು ಕ್ಸೆನಾನ್ ಫ್ಲಾಷ್ ಹೊಂದಿರುತ್ತವೆ, ಅಷ್ಟೇ ಅಲ್ಲದೇ ಸ್ವಯಂ-ನಾಭೀಕರಣ ಸೌಲಭ್ಯವಿರುವ ಛಾಯಾಗ್ರಾಹಕಗಳನ್ನು ಕೂಡಾ ಒಳಗೊಂಡಿರುತ್ತವೆ. 'ನೆವರ್ ಮಿಸ್ ಎ ಷಾಟ್' ಎಂಬ ಘೋಷಣೆಯೊಂದಿಗಿನ ಉಪಕ್ರಮದೊಂದಿಗೆ ಸೋನಿ ಎರಿಕ್‌ಸನ್ ತನ್ನ ಸೈಬರ್-ಷಾಟ್ ದೂರವಾಣಿಗಳ ಜಾಗತಿಕ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿತು. ಈ ಅಭಿಯಾನದಲ್ಲಿ ಅಗ್ರ ಟೆನ್ನಿಸ್ ಆಟಗಾರ್ತಿಯರಾದ ಆನಾ ಇವಾನೊವಿಕ್ ಹಾಗೂ ಡೇನಿಯೆಲಾ ಹಂಟುಕೋವಾರು ಭಾಗವಹಿಸಿದ್ದರು. ೧೦ ಫೆಬ್ರವರಿ ೨೦೦೮ರಂದು, ಈ ಸರಣಿಯು C೭೦೨, C೯೦೨ ಹಾಗೂ C೯೦೫ ದೂರವಾಣಿಗಳ ಘೋಷಣೆಯೊಂದಿಗೆ ವಿಸ್ತರಣೆಗೊಂಡಿತು. - BRAVIA-ವ್ಯಾಪಾರ ಛಾಪಿನ ಸರಣಿಯ ದೂರವಾಣಿಗಳನ್ನು, ೨೦೦೭ರಲ್ಲಿ ಜಪಾನ್ ಮಾರುಕಟ್ಟೆಯಲ್ಲಿ ಮಾತ್ರವೇ ಬಿಡುಗಡೆ ಮಾಡಲಾಯಿತು.
ಪ್ರಸ್ತುತ, ಎರಡು ಸಂಚಾರಿ ದೂರವಾಣಿಗಳು (FOMA SO೯೦೩iTV ಹಾಗೂ FOMA SO೯೦೬i[೧೦]) BRAVIA ವ್ಯಾಪಾರ ಛಾಪನ್ನು ಬಳಸುತ್ತಿವೆ. BRAVIA ವ್ಯಾಪಾರ ಛಾಪಿನ ದೂರವಾಣಿಗಳು 1seg ಭೌಮಿಕ ಕಿರುತೆರೆ ವಾಹಿನಿಗಳನ್ನು ವೀಕ್ಷಿಸುವ ಸೌಲಭ್ಯವನ್ನು ಹೊಂದಿರುತ್ತವೆ. - ೨೦೦೩ರಲ್ಲಿ P೮೦೦ನ ಉಪಕ್ರಮದೊಂದಿಗೆ ಪರಿಚಯಗೊಳಿಸಿದ P ಸರಣಿ ದೂರವಾಣಿಗಳೊಂದಿಗೆ ಸಂಚಾರಿ ದೂರವಾಣಿಗಳ UIQ ಚುರುಕುದೂರವಾಣಿಗಳ ಸರಣಿಯು ಪರಿಚಯಗೊಂಡಿತು.
ಈ ಸಾಧನಗಳು ತಮ್ಮ ಸ್ಪರ್ಶಗ್ರಾಹಿ ಪರದೆಗಳು, QWERTY ಕೀಪ್ಯಾಡ್‌ಗಳು (ಬಹುತೇಕ ಮಾದರಿಗಳಲ್ಲಿ), ಹಾಗೂ Symbian OSನ UIQ ಅಂತರ್ವರ್ತನ ವೇದಿಕೆಯ ಬಳಕೆಯಿಂದಾಗಿ ಗಮನ ಸೆಳೆಯುತ್ತವೆ. ಇವುಗಳನ್ನು ಆ ನಂತರ M ಸರಣಿ ಹಾಗೂ G ಸರಣಿ ದೂರವಾಣಿಗಳಾಗಿ ವಿಸ್ತರಣೆಗೊಳಿಸಲಾಗಿದೆ. - ಫೆಬ್ರವರಿ ೨೦೦೮ರಲ್ಲಿ ಸ್ಪೇನ್‌ನ ಬಾರ್ಸಿಲೋನಾದಲ್ಲಿ ಆಯೋಜಿಸಲಾಗಿದ್ದ ಮೊಬೈಲ್ ವರ್ಲ್ಡ್ ಅಧಿವೇಶನ/ಕಾಂಗ್ರೆಸ್(ಹಿಂದಿನ ೩GSM)ನಲ್ಲಿ ಪರಿಚಯಗೊಂಡ ಸೋನಿ ಎರಿಕ್‌ಸನ್ XPERIA X1ನ ಉಚ್ಚತಮ ಸೌಲಭ್ಯದ ಕಿರೀಟವನ್ನು ಧರಿಸಿದ XPERIA ಸರಣಿಯ ಸಂಚಾರಿ ದೂರವಾಣಿಗಳು ಸೋನಿ ಎರಿಕ್‌ಸನ್ ಪ್ರೋತ್ಸಾಹ ಪಡೆದ ಪ್ರಪ್ರಥಮ ಸ್ವಂತ ವ್ಯಾಪಾರ ಛಾಪಾಗಿದ್ದು, ತನ್ನ ಅಂತಿಮ ಬಳಕೆದಾರರ ನೆಲೆಗಟ್ಟಿನಲ್ಲಿ ತಾಂತ್ರಿಕ ಅಭಿಗಮನವನ್ನು ನೀಡಲು ಉದ್ದೇಶಿಸಿದ ಸಾಧನಗಳಾಗಿದ್ದವು. ಇದರ ಪ್ರಥಮ ಮಾದರಿ, X೧, ಸೋನಿ ಎರಿಕ್‌ಸನ್'ನ ಪ್ಯಾನೆಲ್ ಅಂತರ್ವರ್ತನದೊಂದಿಗೆ Windows Mobile ಕಾರ್ಯಾಚರಣಾ ವ್ಯವಸ್ಥೆಯನ್ನು ಹೊಂದಿತ್ತು. ಅದರ ಭವಿಷ್ಯದ ಮಾದರಿಯಾದ, X೧೦, ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯನ್ನು ಹೊಂದಿರುತ್ತದೆ.
ದೂರವಾಣಿ ಸರಣಿಗಳ ವಿವರಗಳು
[ಬದಲಾಯಿಸಿ]ಸರಣಿ | ವ್ಯಾಪಾರ ಛಾಪು | ವಿವರಣೆ | ಮೂಲ |
---|---|---|---|
A | ಹಳೆಯ ಎರಿಕ್‌ಸನ್ ಶೈಲಿಯ ದೂರವಾಣಿಗಳು. | ||
C | ಸೈಬರ್-ಷಾಟ್ | ಛಾಯಾಗ್ರಾಹಕ-ಕೇಂದ್ರಿತ ದೂರವಾಣಿಗಳು. | ಸೈ ಬರ್-ಷಾಟ್ |
D | T-ಮೊಬೈಲ್ | T-ಮೊಬೈಲ್ ಜಾಲಕ್ಕೆಂದೇ ಪ್ರತ್ಯೇಕವಾಗಿ ನಿರ್ಮಿಸಿದ ದೂರವಾಣಿಗಳು. | ಡ ಚ್ ಟೆಲಿಕಾಮ್ |
F | ವೊಡಾಫೋನ್ (ಭಾಗಶಃ) | ವೊಡಾಫೋನ್ ಜಾಲಕ್ಕೆಂದೇ ಪ್ರತ್ಯೇಕವಾಗಿ ನಿರ್ಮಿಸಿದ ದೂರವಾಣಿಗಳು; ಆಟಗಳ ಮೇಲೆ ಕೇಂದ್ರೀಕೃತವಾದ ದೂರವಾಣಿಗಳು | ವೊಡಾಫೋ ನ್/ ಫ ನ್/ಮೋಜು |
G | - | ಅಂತರಜಾಲ ಜಾಲಾಟ-ಕೇಂದ್ರಿತ ದೂರವಾಣಿಗಳು. | ಜ ನರೇಷನ್ ವೆಬ್ |
J | - | ಕನಿಷ್ಟ-ತಂತ್ರಜ್ಞಾನದ ಸರಣಿ | ಜ್ಯೂ ನಿಯರ್ |
K | ಸೈಬರ್-ಷಾಟ್ (ಭಾಗಶಃ), 3G (ಭಾಗಶಃ) | ಸರ್ವತೋಮುಖ ದೂರವಾಣಿಗಳು | ಛಾಯಾಗ್ರಾಹಕ ಪದದ, ಸ್ವೀಡಿಷ್ ರೂಪ ಕೆ ಮರಾ |
M | - | ವ್ಯವಹಾರ -ಕೇಂದ್ರಿತ ಚುರುಕುದೂರವಾಣಿಗಳು. | ಮೆ ಸೇಜಿಂಗ್/ಸಂದೇಶ ಕಳುಹಿಸುವಿಕೆ |
P | - | ಪವರ್‌ಹೌಸ್ ಚುರುಕುದೂರವಾಣಿಗಳು. | P DA |
R | - | ಅಂತರ್ನಿವಿಷ್ಟ AM/FM ರೇಡಿಯೋನೊಂದಿಗಿನ ದೂರವಾಣಿಗಳು | ರೇ ಡಿಯೊ |
S | - | ಫ್ಯಾಷನ್ ಹಾಗೂ ಛಾಯಾಗ್ರಾಹಕ ಕೇಂದ್ರಿತ ದೂರವಾಣಿಗಳು. | ಸ್ವಿ ವೆಲ್, ಸ್ಲೈ ಡರ್, ಸ್ನಾ ಪ್‌ಷಾಟ್ |
T | - | ಸರ್ವತೋಮುಖ ದೂರವಾಣಿಗಳು | ಟಾ ಲಾ ("ಸಂಭಾಷಣೆಗೆ " ಸ್ವೀಡಿಷ್ ಪದ) |
TM | T-ಮೊಬೈಲ್ | T-ಮೊಬೈಲ್ USA ಜಾಲಕ್ಕೆಂದೇ ಪ್ರತ್ಯೇಕವಾಗಿ ನಿರ್ಮಿಸಿದ ದೂರವಾಣಿಗಳು | T -ಮೊ ಬೈಲ್ |
U | ಎಂಟರ್‌ಟೇನ್‌ಮೆಂಟ್ ಅನ್‌ಲಿಮಿಟೆಡ್ | “ಎಂಟರ್‌ಟೇನ್‌ಮೆಂಟ್ ಅನ್‌ಲಿಮಿಟೆಡ್” ವ್ಯಾಪಾರ ಛಾಪಿನಡಿಯಲ್ಲಿ ಉಪಕ್ರಮಿಸಿದ ದೂರವಾಣಿಗಳ ಆಂತರಿಕ/ಇಂಟರ್ನಲ್ ಮಾದರಿ ಸಂಖ್ಯೆ | ಅ ನ್‌ಲಿಮಿಟೆಡ್/ಅ ನಿಯಮಿತ |
V | ವೊಡಾಫೋನ್ | ವೊಡಾಫೋನ್ ಜಾಲಕ್ಕೆಂದೇ ಪ್ರತ್ಯೇಕವಾಗಿ ನಿರ್ಮಿಸಿದ ದೂರವಾಣಿಗಳು. | ವೊ ಡಾಫೋನ್ |
W | ವಾಕ್‌ಮನ್ | ಸಂಗೀತ-ಕೇಂದ್ರಿತ ದೂರವಾಣಿಗಳು. | ವಾ ಕ್‌ಮನ್ |
X | ಎಕ್ಸ್‌ಪೀರಿಯಾ | ಕನ್‌ವರ್ಜೆನ್ಸ್ ಹಾಗೂ ಪವರ್‌ಹೌಸ್ ಸಾಧನಗಳು. | ಎಕ್ಸ್ ಪೀರಿಯಾ |
Z | Ze ಬಾಬ್ಬರ್ | ವಿನ್ಯಾಸ-ಕೇಂದ್ರಿತ ದೂರವಾಣಿಗಳು/ಕ್ಲಾಮ್‌ಷೆಲ್‌ಗಳು | Z e ಬಾಬ್ಬರ್' |
ನಾಮಕರಣ ವಿಧಾನ/ಆಚರಣೆ/ರೂಢಿ
[ಬದಲಾಯಿಸಿ]ಪ್ರಸ್ತುತ ವ್ಯವಸ್ಥೆ
[ಬದಲಾಯಿಸಿ]೨೦೦೮ರ ಮೊಬೈಲ್ ವರ್ಲ್ಡ್ ಅಧಿವೇಶನ/ಕಾಂಗ್ರೆಸ್‌ನ ನಂತರ, ಸೋನಿ ಎರಿಕ್‌ಸನ್ ಪ್ರತಿ ಅಕ್ಷರವು "ಸರಣಿ", "ವ್ಯಾಪ್ತಿ/ವರ್ಗ", "ಆವೃತ್ತಿ" ಹಾಗೂ "ಉಪಕರಣ ವಿನ್ಯಾಸ/ಫಾರ್ಮ್ ಫ್ಯಾಕ್ಟರ್"ಗಳನ್ನು ಅನುಕ್ರಮವಾಗಿ ಸೂಚಿಸುವ ನಾಲ್ಕು ಅಕ್ಷರಗಳ ತನ್ನ ನವೀನ ನಾಮಕರಣಾ ವ್ಯವಸ್ಥೆಯನ್ನು ಘೋಷಿಸಿತು.
ಸರಣಿ | ವ್ಯಾಪ್ತಿ/ವರ್ಗ | ಆವೃತ್ತಿ | ಉಪಕರಣ ವಿನ್ಯಾಸ/ಫಾರ್ಮ್ ಫ್ಯಾಕ್ಟರ್ |
(ಸರಣಿಯ ಅಕ್ಷರಗಳ ವಿವರಗಳಿಗೆ ಮೇಲೆ ನೋಡಿ) | 1-4: ಕನಿಷ್ಟ-ತಂತ್ರಜ್ಞಾನ 5-7: ಮಧ್ಯಮ-ತಂತ್ರಜ್ಞಾನ 8-9: ಉನ್ನತ-ತಂತ್ರಜ್ಞಾನ |
(ಅನುಕ್ರಮಣಿಕೆಯ ಸಾಂಖ್ಯಿಕ ಸರಣಿಯ ಶ್ರೇಣಿಯ ಪ್ರಕಾರ) | 0-2: ಕ್ಯಾಂಡಿಬಾರ್ 3-5: ಸ್ಲೈಡರ್ 6-8: ಕ್ಲಾಮ್‌ಷೆಲ್ 9: ಇತರೆ |
"a", "c" ಹಾಗೂ "i" ಪೂರ್ವ ಪ್ರತ್ಯಯಗಳನ್ನು ಅಮೇರಿಕನ್, ಚೀನೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳ ಮಾದರಿಯನ್ನು ಅನುಕ್ರಮವಾಗಿ ಸೂಚಿಸುತ್ತವೆ [೧೧]
ಹಿಂದಿನ ಪದ್ಧತಿ/ವ್ಯವಸ್ಥೆಗಳು
[ಬದಲಾಯಿಸಿ]ಸೋನಿ ಎರಿಕ್‌ಸನ್ ಸಂಸ್ಥೆಯು ತಮ್ಮ ಸಂಚಾರಿ ದೂರವಾಣಿ ಸಾಧನಗಳ ನಾಮಕರಣ ವಿಧಾನದಲ್ಲಿ ಈ ಹಿಂದೆ ಮೂರು ವಿಧಾನಗಳನ್ನು ಬಳಸುತ್ತಿತ್ತು:
- ಬಹು ಸಾಮಾನ್ಯ ಮಾದರಿಗಳು ಒಟ್ಟಾರೆ ಐದು (ಅಥವಾ ಆರು) ಅಕ್ಷರಗಳನ್ನು ಬಳಸುತ್ತವೆ, e.g. K೭೫೦i.
ದೂರವಾಣಿಗಳ (K ೭೫೦i) ಸರಣಿಗಳನ್ನು ಸೂಚಿಸಲು ಈ ಮಾದರಿಗಳು ಆಂಗ್ಲ ದೊಡ್ಡಕ್ಷರದೊಂದಿಗೆ ಆರಂಭಗೊಳ್ಳುತ್ತವೆ. ಇದು ನಂತರ ಮೂರು ಸಂಖ್ಯೆಗಳನ್ನು ಹೊಂದಿರುತ್ತದೆ (K೭೫೦ i). ಪ್ರಥಮ ಸಂಖ್ಯೆಯು ದೂರವಾಣಿಯ ಉಪ-ಸರಣಿಯನ್ನು ಸೂಚಿಸಿದರೆ, ಎರಡನೆಯದು ಹಿಂದಿನ ಆವೃತ್ತಿಯಿಂದ ಆದ ಪ್ರಗತಿಯನ್ನು ಸೂಚಿಸುತ್ತದೆ, i.e. K೭೦ ೦iರಿಂದ K೭೫ ೦i ಆದ ಹಾಗೆ, ಹಾಗೂ ಮೂರನೇ ಸಂಖ್ಯೆಯು ಯಾವಾಗಲೂ '೦','೫' ಅಥವಾ '೮' ಇವು ಮೂರರಲ್ಲಿ ಒಂದಾಗಿರುತ್ತದೆ. '೮' ಎಂಬ ಸಂಖ್ಯೆಯನ್ನು ದೂರವಾಣಿ ಬೇರೆಯೇ ಆದ ಮಾರುಕಟ್ಟೆಗೆ ಸೌಲಭ್ಯವೊಂದನ್ನು ಹೊರತುಪಡಿಸಿ ನಿರ್ಮಿಸಿದ ರೂಪಾಂತರವನ್ನು ಸೂಚಿಸಲು, e.g. W೮೮೮ ಮಾದರಿಯು ೩G ಸೌಲಭ್ಯವಿಲ್ಲದ W೮೮೦i ಆಗಿದೆ, ಅಥವಾ ಸಮಾನ ಶಿಷ್ಟತೆ/ವೈಶಿಷ್ಟ್ಯತೆಗಳನ್ನು ಹೊಂದಿದ್ದೂ ಬೇರೆಯೇ ಆದ ವಿನ್ಯಾಸವನ್ನು ಹೊಂದಿರುವ ದೂರವಾಣಿಗಳನ್ನು ಪ್ರತ್ಯೇಕಿಸಲು ಬಳಸಲಾಗುತ್ತದೆ, e.g. K೬೧೦ i ಹಾಗೂ K೬೧೮ i ಅಥವಾ k೮೦೦i ಹಾಗೂ k೮೧೦i. ಸಂಖ್ಯೆಯನ್ನು ನವೀನ ಮಾದರಿಗಳನ್ನು ಸೂಚಿಸಲು ಬಳಸಲಾಗುತ್ತದಲ್ಲದೇ ಇದರಲ್ಲಿ ಪ್ರಥಮ ಎರಡು ಸಂಖ್ಯೆಗಳು ಹಾಗೂ ಸೊನ್ನೆಯನ್ನು ಹಿಂದಿನ ಮಾದರಿಯಲ್ಲಿಯೇ ಬಳಸಲಾಗಿರುತ್ತದೆ, ಉದಾಹರಣೆಗೆ W೭೦೦ ಹಾಗೂ W೭೦೫ ಮಾದರಿಗಳ ಸಂದರ್ಭದ ರೀತಿ, ಇದು ಹೆಚ್ಚು ಹೆಸರುಗಳನ್ನು ನೀಡುವ ಅವಕಾಶವನ್ನು ನೀಡುತ್ತದೆ. ಅಂತಿಮವಾಗಿ, ಮಾದರಿಯ ಹೆಸರಿನ ಕೊನೆಯ ಸಣ್ಣಕ್ಷರವು ಉತ್ಪನ್ನವು ಯಾವ ಮಾರುಕಟ್ಟೆಗೆಂದು ಉದ್ದೇಶಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ; ಅವುಗಳೆಂದರೆ: ಅಮೇರಿಕಾಗಳಿಗೆ a , ಚೀನಾಗೆ c , ಹಾಗೂ i ಅಂತರರಾಷ್ಟ್ರೀಯ ಆವೃತ್ತಿಯನ್ನು ಸೂಚಿಸುತ್ತವೆ ; 'im' ಎಂಬ ಅಂತ್ಯಪ್ರತ್ಯಯ ಕೂಡಾ ಇದ್ದು ಅದು i-ಮೋಡ್ ದೂರವಾಣಿಗಳ ವ್ಯಾಪಾರೀ ಛಾಪನ್ನು ಸೂಚಿಸಲು ಬಳಸಲಾಗುತ್ತದೆ. ಯಾವುದೇ ಪ್ರದೇಶ-ವಿಶಿಷ್ಟ ವ್ಯಾಪಾರೀ ಛಾಪನ್ನು ಉದ್ದೇಶಿಸದೇ ಸಾರ್ವತ್ರಿಕವಾಗಿ ನಿರ್ಮಿಸಿದ ದೂರವಾಣಿಗಳನ್ನು ಸೂಚಿಸಲು ಅನೇಕವೇಳೆ ಅಂತಿಮ ಅಕ್ಷರವನ್ನು ಬಿಟ್ಟುಹಾಕಲಾಗುತ್ತದೆ. - ನವೀನ ಸ್ವರೂಪವೊಂದು ಒಟ್ಟಾರೆ ಮೂರು ಅಕ್ಷರಗಳನ್ನು ಬಳಸುತ್ತದೆ, e.g. P೧i. ಈ ಸ್ವರೂಪವನ್ನು ಪ್ರತಿ ದೂರವಾಣಿ ಸರಣಿಗಳ ಅಗ್ರ ಮಾದರಿಯನ್ನು ಹೆಸರಿಸಲು ಬಳಸಲಾಗುತ್ತದೆಂದು ನಂಬಲಾಗಿದೆ, ಇದಕ್ಕೆ ಪ್ರಮುಖ ಕಾರಣವೆಂದರೆ ನಿಯಮಿತ ಸಂಖ್ಯಾ ಸಂಯೋಜನೆಗಳ ಲಭ್ಯತೆ.
ಇದು ದೂರವಾಣಿಯ (P ೧i) ಸರಣಿಯನ್ನು ಸೂಚಿಸುವ ದೊಡ್ಡಕ್ಷರದೊಂದಿಗೆ ಆರಂಭಗೊಳ್ಳುತ್ತದೆ. ಹಿಂದಿನ ಆವೃತ್ತಿಯಿಂದ (P೧ i) ಉಂಟಾದ ಪ್ರಗತಿಯ ಪ್ರಮಾಣವನ್ನು ಸೂಚಿಸಲು ಹಾಗೂ ಅಂತಿಮ ಸಣ್ಣಕ್ಷರವು ಮೇಲೆ ತಿಳಿಸಿದ ಹಾಗೆ ಉತ್ಪನ್ನವು ಯಾವ ಮಾರುಕಟ್ಟೆಗೆ ಉದ್ದೇಶಿಸಲಾಗಿದೆ ಎಂಬುದನ್ನು ಸೂಚಿಸಲು ಬಳಸಲಾಗುತ್ತದೆ. ಅಷ್ಟೇ ಅಲ್ಲದೇ, ಯಾವುದೇ ಪ್ರದೇಶ-ವಿಶಿಷ್ಟ ವ್ಯಾಪಾರೀ ಛಾಪನ್ನು ಉದ್ದೇಶಿಸದೇ ಸಾರ್ವತ್ರಿಕವಾಗಿ ನಿರ್ಮಿಸಿದ ದೂರವಾಣಿಗಳನ್ನು ಸೂಚಿಸಲು ಅನೇಕವೇಳೆ ಅಂತಿಮ ಅಕ್ಷರವನ್ನು ಬಿಟ್ಟುಹಾಕಲಾಗುತ್ತದೆ. - ಅತಿ ಹಳೆಯದಾದ ನಾಮಕರಣ ಸ್ವರೂಪವು ಒಟ್ಟಾರೆ ನಾಲ್ಕು ಅಕ್ಷರಗಳನ್ನು ಬಳಸುತ್ತದೆ, e.g. T೬೮i. ಈ ಸ್ವರೂಪವು ಎರಿಕ್‌ಸನ್ ಸಂಚಾರಿ ದೂರವಾಣಿ ವ್ಯವಹಾರದಲ್ಲಿ ಬಳಸುತ್ತಿದ್ದ ನಾಮಕರಣ ಸ್ವರೂಪದ ಮುಂದುವರಿಕೆಯಾಗಿದ್ದು ಇದನ್ನು ಒಮ್ಮೆ ಮಾತ್ರವೇ ಬಳಸಲಾಗಿತ್ತು.
ಈ ಸ್ವರೂಪವು ದೂರವಾಣಿ (T ೬೮i)ಯ ಸ್ವರೂಪವನ್ನು ಸೂಚಿಸಲು ದೊಡ್ಡಕ್ಷರದೊಂದಿಗೆ ಆರಂಭಗೊಳ್ಳುತ್ತದೆ. ಪ್ರಥಮ ಸಂಖ್ಯೆಯು ದೂರವಾಣಿ (T೬ ೮i)ಯ ಉಪ-ಸರಣಿಯನ್ನು ಸೂಚಿಸುತ್ತದೆ ಹಾಗೂ ಎರಡನೇ ಅಕ್ಷರ ಹಿಂದಿನ ಆವೃತ್ತಿಯಿಂದಾದ ಪ್ರಗತಿಯನ್ನು ಸೂಚಿಸುತ್ತದೆ. ಅಂತಿಮ ಸಣ್ಣಕ್ಷರವು ಹಿಂದಿನ ಮಾದರಿಯೊಂದರ ನವೀಕರಣವನ್ನು ಸೂಚಿಸುತ್ತದೆ, i.e. T೬೮ನಿಂದ T೬೮i .
ಮತ್ತೊಂದು ವಿಲಕ್ಷಣ ನಾಮಕರಣ ಸ್ವರೂಪವು Z೧೦೧೦ ಮಾದರಿಯನ್ನು ಹೆಸರಿಸಲು ಬಳಸಿದ್ದಾಗಿತ್ತು; ಈ ಸ್ವರೂಪವನ್ನು Z೧೦೧೦ರ ನಂತರ ಮತ್ತೆ ಬಳಸಲಾಗಿಲ್ಲ.
ಅಷ್ಟೇ ಅಲ್ಲದೇ, ಸೋನಿ ಎರಿಕ್‌ಸನ್ ಅಭಿವೃದ್ಧಿಪಡಿಸುವಾಗ ಯಾವಾಗಲೂ ತಮ್ಮ ದೂರವಾಣಿಗಳಿಗೆ ಸಂಕೇತನಾಮವನ್ನು ನೀಡುತ್ತದೆ. ಹೀಗೆ ಮಾಡುವುದು ಪ್ರಮುಖವಾಗಿ ಮಾಹಿತಿಯನ್ನು ರಹಸ್ಯವಾಗಿಡಲು ಹಾಗೂ ರಹಸ್ಯ ಸೋರಿಕೆಯಾಗದಂತೆ ತಡೆಗಟ್ಟುವ ಉದ್ದೇಶದಿಂದ. ಎಲ್ಲಾ ಸಂಕೇತನಾಮಗಳು ಸ್ತ್ರೀನಾಮವನ್ನು ಹೊಂದಿದ್ದು, ಅವುಗಳಲ್ಲಿ ಕೆಲವು ಸೋನಿ ಎರಿಕ್‌ಸನ್ -ಪ್ರಾಯೋಜಿತ ಟೆನ್ನಿಸ್ ಪಂದ್ಯಾವಳಿ, WTAನ ಆಟಗಾರ್ತಿಯರ ಹೆಸರಾಗಿವೆ.
ಹಣಕಾಸಿನ ಮಾಹಿತಿ
[ಬದಲಾಯಿಸಿ]ಸೋನಿ ಎರಿಕ್‌ಸನ್ ತನ್ನ ಪ್ರಥಮ ಲಾಭಗಳಿಕೆಯನ್ನು ೨೦೦೩ರ ಉತ್ತರಭಾಗದಲ್ಲಿ ಪ್ರಕಟಿಸಿತ್ತು. ಆಗಿನಿಂದ, ದೂರವಾಣಿಗಳ ಮಾರಾಟದ ಅಂಕಿಅಂಶಗಳು ಕೆಳಕಂಡಂತಿವೆ:
- ೨೦೦೪: ೪೨ ದಶಲಕ್ಷ ಸಾಧನಗಳು[೧೨]
- ೨೦೦೫: ೫೦ ದಶಲಕ್ಷ ಸಾಧನಗಳು[೧೩]
- ೨೦೦೬: ೭೪.೮ ದಶಲಕ್ಷ ಸಾಧನಗಳು[೧೪]
- ೨೦೦೭: ೧೦೩.೪ ದಶಲಕ್ಷ ಸಾಧನಗಳು[೧೫]
- ೨೦೦೮: ೯೬.೬ ದಶಲಕ್ಷ ಸಾಧನಗಳು[೧೬]
- ೨೦೦೯: ೫೭.೧ ದಶಲಕ್ಷ ಸಾಧನಗಳು[೧೭]
ಸ್ವೀಡಿಷ್ ನಿಯತಕಾಲಿಕೆ M೩ sನ ೭/೨೦೦೬ರ ಸಂಚಿಕೆಯ ಪ್ರಕಾರ Nokiaನ ನಂತರ ಸೋನಿ ಎರಿಕ್‌ಸನ್ ನಾರ್ಡಿಕ್ ರಾಷ್ಟ್ರಗಳಲ್ಲಿ ಅತ್ಯಧಿಕ-ಮಾರಾಟದ ದೂರವಾಣಿ ವ್ಯಾಪಾರೀ ಛಾಪಾಗಿದೆ.
೨೦೦೯ರ ಮೂರನೇ ತ್ರೈಮಾಸಿಕದಲ್ಲಿ, Nokia(೩೭.೮%), Samsung(೨೧%) ಹಾಗೂ LG(೧೧%)ಗಳ ನಂತರ ಸೋನಿ ಎರಿಕ್‌ಸನ್ ೪.೯%ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ವಿಶ್ವದ ನಾಲ್ಕನೇ ಅತಿ ದೊಡ್ಡ ಸಂಚಾರಿ ದೂರವಾಣಿ ತಯಾರಕ ಸಂಸ್ಥೆಯಾಗಿತ್ತು.
ಹೊಂದುವಿಕೆ
[ಬದಲಾಯಿಸಿ]E3ಯ ಅವಧಿಯಲ್ಲಿ ೨೦೦೭ರ ಮಾಧ್ಯಮ ಹಾಗೂ ವ್ಯವಹಾರ/ಮೀಡಿಯಾ ಅಂಡ್ ಬಿಸಿನೆಸ್ ಸಮ್ಮೇಳನ/ಸಮ್ಮಿಟ್‌ನಲ್ಲಿ, ಫಿಲ್ ಹ್ಯಾರಿಸನ್, Sonyಯ CEO ಪ್ಲೇಸ್ಟೇಷನ್'ನ XMBಯನ್ನು ಬಳಸಿಕೊಂಡು ಸೋನಿ ಎರಿಕ್‌ಸನ್ ದೂರವಾಣಿಯನ್ನು ಪ್ರದರ್ಶಿಸಿದರು. ಆಯ್ದ ದೂರವಾಣಿಗಳ ಗುಂಪುಗಳೂ ಕೂಡಾ ಪ್ಲೇಸ್ಟೇಷನ್ ಹೋಮ್‌ನೊಂದಿಗೆ (ಅಂತಿಮ ಉತ್ಪನ್ನ) ಸಮಗ್ರಗೊಳಿಸಲಾಗುತ್ತಿದೆ
ಸೋನಿ ಎರಿಕ್‌ಸನ್ K೮೫೦, W೯೬೦ ಹಾಗೂ W೯೧೦ಗಳ ಘೋಷಣೆಯ ಸಂದರ್ಭದಲ್ಲಿ ಕೆಲ ವಿಮರ್ಶಾ ಜಾಲತಾಣಗಳು ಹಾಗೆ ಘೋಷಿತಗೊಂಡ ದೂರವಾಣಿಗಳು ಹೊಸದೊಂದು ಮಾಧ್ಯಮ ನಿರ್ವಾಹಕವನ್ನು ಹೊಂದಿದ್ದು ಅದು ಮಾನಕವಾದ ಸೋನಿ ಎರಿಕ್‌ಸನ್ ಕಡತ ನಿರ್ವಾಹಕದ ಬದಲಿಕೆಯಾಗಿ Sony PS೩ ಹಾಗೂ PSP ಉತ್ಪನ್ನಗಳಲ್ಲಿ ಕಂಡುಬರುವ XMB ಅಂತರ್ವರ್ತನವನ್ನು ಹೋಲುವ UIಯನ್ನು ಹೊಂದಿವೆ ಎಂದು ತೋರಿಸಿದ್ದವು. ಸಂಚಾರಿ ದೂರವಾಣಿ ತಂತ್ರಾಂಶಗಳ ತಯಾರಕ ಜಾಲತಾಣವು ತಮ್ಮ ಶಿಷ್ಟತೆಯ ವಿವರಣೆ ದಾಖಲೆಗಳನ್ನು ಹಾಗೂ ಅಧಿಕೃತ ದಾಖಲೆ/ಶ್ವೇತಪತ್ರಗಳ ಮೂಲಕ XMB ಮಾಧ್ಯಮ ನಿರ್ವಾಹಕವು A೨೦೦ ವೇದಿಕೆ ಎಂದೂ ಕರೆಯಲ್ಪಡುವ ಜಾವಾ ವೇದಿಕೆ ೮ ಆ ದೂರವಾಣಿಗಳಿಗೆ ಮಾನಕವಾಗಿದೆ ಎಂದು ಶ್ರುತಪಡಿಸಿವೆ.
ಕಾರ್ಯನಿರ್ವಹಣೆಗಳು
[ಬದಲಾಯಿಸಿ]೨೦೦೯ರಲ್ಲಿ ಸೋನಿ ಎರಿಕ್‌ಸನ್ ಉತ್ತರ ಕೆರೊಲಿನಾದ ಸಂಶೋಧನಾ ತ್ರಿಕೋನ/ರಿಸರ್ಚ್ ಟ್ರೈಯಾಂಗಲ್ ಪಾರ್ಕ್‌ನ ಉತ್ತರ ಅಮೇರಿಕಾದ ಪ್ರಧಾನ ಕಚೇರಿಯನ್ನು ಅಲ್ಲಿಂದ ಅಟ್ಲಾಂಟಾಗೆ ಸ್ಥಳಾಂತರಿಸುತ್ತಿರುವುದಾಗಿ ಘೋಷಿಸಿತು. ಪ್ರಧಾನ ಕಚೇರಿಯ ಸ್ಥಳಾಂತರವು ತನ್ನ ಕಾರ್ಯಪಡೆಯ ಸಂಖ್ಯೆಯನ್ನು ಆಗಿದ್ದ ೧೦,೦೦೦ ಉದ್ಯೋಗಿಗಳಿಂದ ೨೦%ರಷ್ಟು ತಗ್ಗಿಸಲು ಮಾಡಿದ ಯೋಜನೆಯ ಭಾಗವಾಗಿತ್ತು. ಆ ವರ್ಷದ ಹೊತ್ತಿಗೆ ಸೋನಿ ಎರಿಕ್‌ಸನ್ ಸಂಶೋಧನಾ ತ್ರಿಕೋನ/ರಿಸರ್ಚ್ ಟ್ರೈಯಾಂಗಲ್ ಪಾರ್ಕ್‌ನಲ್ಲಿ ೪೨೫ ಉದ್ಯೋಗಿಗಳನ್ನು ಹೊಂದಿತ್ತು ; ಉದ್ಯೋಗಿಗಳ ಸಂಖ್ಯೆಯನ್ನು ಹಂಗಾಮಿ ವಜಾಗಳ ಕಾರಣಗಳಿಂದಾಗಿ ನೂರರ ಸಂಖ್ಯೆಯಲ್ಲಿ ಕಡಿತ ಮಾಡಲಾಯಿತು.[೧೮] ಸ್ಟ್ಯಾಸಿ ಡಾಸ್ಟರ್ ಎಂಬ ಸೋನಿ ಎರಿಕ್‌ಸನ್ ಸಂಸ್ಥೆಯ ವಕ್ತಾರೆ, ಲ್ಯಾಟಿನ್ ಅಮೇರಿಕಾಗೆ ಹೋಗುವ ವಿಮಾನಗಳಿಗೆ ಹೋಗಲು ಹಾರ್ಟ್ಸ್‌ಫೀಲ್ಡ್-ಜ್ಯಾಕ್ಸನ್ ಅಟ್ಲಾಂಟಾ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕಿರುವ ದೂರ, ಹಾಗೂ AT&T ಮೊಬಿಲಿಟಿ ಸಂಸ್ಥೆಯ ಕಾರ್ಯಾಚರಣೆಗಳು USA ಪ್ರಧಾನಕಚೇರಿಯ ಸ್ಥಳಾಂತರದ ಮೇಲೆ ಪ್ರಭಾವ ಬೀರಿವೆ ಎಂದು ಹೇಳಿಕೆ ನೀಡಿದರು. ಸೋನಿ ಎರಿಕ್‌ಸನ್ ಸಂಶೋಧನಾ ತ್ರಿಕೋನ/ರಿಸರ್ಚ್ ಟ್ರೈಯಾಂಗಲ್ ಕಛೇರಿಯನ್ನು ಮುಚ್ಚಲಿದೆ.[೧೮][೧೯]
ಇವನ್ನೂ ನೋಡಿ
[ಬದಲಾಯಿಸಿ]- Sony
- Ericsson
- LG
- Nokia
- Samsung
- Symbian
- ಮೈಟೆಲಿಫೋನ್ ಎಕ್ಸ್ಪ್ಲೋರರ್ - MS Windowsಗೆಂದು ತಯಾರಿಸಿದ ಸಂಪೂರ್ಣ ಸೌಲಭ್ಯವುಳ್ಳ ಸೋನಿ ಎರಿಕ್‌ಸನ್ ನಿರ್ವಹಣಾ ತಂತ್ರಾಂಶ ವಾಗಿದೆ (Bluetooth, ಅವಕೆಂಪು ಅಥವಾ USBಗಳ ಮೂಲಕ ದೂರವಾಣಿಯಲ್ಲಿರುವ ಎಲ್ಲಾ ದತ್ತವನ್ನೂ ಮೀಸಲು-ಸಂಗ್ರಹ ಮಾಡುವಿಕೆ, ಮೇಳೈಸುವಿಕೆ ಹಾಗೂ ಸಂಪಾದನೆಯನ್ನು ಮಾಡುವಿಕೆ)
- ಮೀಡಿಯಾ ಗೋ -ಸೋನಿ ಎರಿಕ್‌ಸನ್ ದೂರವಾಣಿಗಳಿಗೆಂದು ತಯಾರಿಸಿರುವ ಸಂಗೀತ, ಛಾಯಾಚಿತ್ರ, ವಿಡಿಯೋ, ಹಾಗೂ ಆಟಗಳ ನಿರ್ವಹಣಾ ತಂತ್ರಾಂಶ
- ಡಿಸ್ಕ್2ಫೋನ್ -ಸೋನಿ ಎರಿಕ್‌ಸನ್ ದೂರವಾಣಿಗಳಿಗೆಂದು ತಯಾರಿಸಿರುವ ಸಂಗೀತ ನಿರ್ವಹಣಾ ತಂತ್ರಾಂಶ
- ಸೋನಿಕ್ಸ್ಟೇಜ್ - ಜಪಾನ್ ಮಾರುಕಟ್ಟೆ ದೂರವಾಣಿಗಳಿಗೆಂದು ತಯಾರಿಸಿರುವ ಸಂಗೀತ ನಿರ್ವಹಣಾ ತಂತ್ರಾಂಶ.
- ಪ್ಲೇನೌ - ಜಾಗತಿಕ ಮಾಹಿತಿ/ಸಂಗೀತ ವಿತರಣಾ ಪೋರ್ಟಲ್ ಜಾಲತಾಣ
- ಸೋನಿ ಎರಿಕ್‌ಸನ್ ಉತ್ಪನ್ನಗಳ ಪಟ್ಟಿ
ಆಕರಗಳು
[ಬದಲಾಯಿಸಿ]- ↑ ೧.೦ ೧.೧ "Ericsson - press release". Cision Wire. Archived from the original on 2009-07-14. Retrieved 2001-10-01.
- ↑ "ಆರ್ಕೈವ್ ನಕಲು". Archived from the original on 2010-08-01. Retrieved 2010-07-22.
- ↑ IDG.se - 3150 have been fired
- ↑ "ಆರ್ಕೈವ್ ನಕಲು". Archived from the original on 2020-09-27. Retrieved 2021-08-09.
- ↑ €133 million to $ - Google Search
- ↑ ಸೋನಿ ಎರಿಕ್‌ಸನ್ ಇಷ್ಯೂಸ್ ಸೆಕಂಡ್ ಪ್ರಾಫಿಟ್ ವಾರ್ನಿಂಗ್ ಆಫ್ ದ ಇಯರ್, ಹೋಪ್ಸ್ ಟು ಬ್ರೇಕ್ ಈವನ್ ಇನ್ Q2 - Engadget
- ↑ ಸೋನಿ ಎರಿಕ್‌ಸನ್ ಪ್ರಾಫಿಟ್ಸ್ ಕ್ರ್ಯಾಷ್ 48% - TrustedReviews
- ↑ "ವೆನ್ ದ ಚೈನ್ ಬ್ರೇಕ್ಸ್ " (ಜೂನ್ ೧೭, ೨೦೦೬). ದ ಇಕನಾಮಿಸ್ಟ್ : ವ್ಯವಸ್ಥಾಪನೆಯ ಒಂದು ಸಮೀಕ್ಷೆ , p. ೧೮.
- ↑ Sony Ericsson seeks shareholders for UIQ software company - MarketWatch
- ↑ NTT ಡೊಕೊಮೊ SO906i Archived 2008-12-21 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "ನವೀನವಾಗಿ ಹೊರತರಲಾಗುವ ಸೋನಿ ಎರಿಕ್‌ಸನ್ ದೂರವಾಣಿಗಳ ಹೊಸ ನಾಮಕರಣ ವ್ಯವಸ್ಥೆ - ಅನಧಿಕೃತ ಸೋನಿ ಎರಿಕ್‌ಸನ್ ಬ್ಲಾಗ್". Archived from the original on 2008-09-15. Retrieved 2010-07-22.
- ↑ ಗಾರ್ಟ್‌ನರ್ ಜಾಲತಾಣದ ಪ್ರಕಾರ ಅಗ್ರ ಆರು ಮಾರಾಟಗಾರರ ಕಾರ್ಯಗತಗೊಳಿಸುವಿಕೆಯು ವಿಶ್ವದಾದ್ಯಂತ ಸಂಚಾರಿ ದೂರವಾಣಿಗಳ ಮಾರಾಟವು 2005ರಲ್ಲಿ ಪ್ರತಿಶತ 21 ಬೆಳವಣಿಗೆ ಕಾಣಲು ಕಾರಣವಾಗಿದೆ Archived 2010-10-10 ವೇಬ್ಯಾಕ್ ಮೆಷಿನ್ ನಲ್ಲಿ., gartner.com, ೨೮ ಫೆಬ್ರವರಿ ೨೦೦೬.
- ↑ ಸೋನಿ ಎರಿಕ್‌ಸನ್ ದಾಖಲೆ ಪ್ರಮಾಣದ ಸರಕು ಸಾಗಣೆಯನ್ನು ಮಾರಾಟ ಹಾಗೂ ಲಾಭಗಳನ್ನು ದಾಖಲಿಸಿದೆ Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ., sonyericsson.com, ೧೮ ಜನವರಿ ೨೦೦೬.
- ↑ ದಾಖಲೆ ಮೊತ್ತದ ವ್ಯವಹಾರದ ತ್ರೈಮಾಸಿಕವು ಸೋನಿ ಎರಿಕ್‌ಸನ್‌ಗೆ ದಾಖಲೆ ವರ್ಷದ ಕಿರೀಟವನ್ನು ತೊಡಿಸಲಿದೆ Archived 2007-10-14 ವೇಬ್ಯಾಕ್ ಮೆಷಿನ್ ನಲ್ಲಿ., sonyericsson.com, ೧೭ ಜನವರಿ ೨೦೦೭.
- ↑ ಸೋನಿ ಎರಿಕ್‌ಸನ್ 2007ರಲ್ಲಿ 100 ದಶಲಕ್ಷಕ್ಕೂ ಹೆಚ್ಚಿನ ಹ್ಯಾಂಡ್‌ಸೆಟ್‌ಗಳನ್ನು ಮಾರಾಟ ಮಾಡಿದೆ Archived 2010-07-28 ವೇಬ್ಯಾಕ್ ಮೆಷಿನ್ ನಲ್ಲಿ., sonyericsson.com, ೧೬ ಜನವರಿ ೨೦೦೮.
- ↑ ಸೋನಿ ಎರಿಕ್‌ಸನ್ 2008 ಅನ್ನು ನಾಲ್ಕನೇ ತ್ರೈಮಾಸಿಕ ಹಾಗೂ ಸಂಪೂರ್ಣ ವರ್ಷದ ಆರ್ಥಿಕ ಫಲಿತಾಂಶವನ್ನು ಘೋಷಿಸಿದೆ Archived 2010-07-27 ವೇಬ್ಯಾಕ್ ಮೆಷಿನ್ ನಲ್ಲಿ., sonyericsson.com, ೧೬ ಜನವರಿ ೨೦೦೯.
- ↑ ಸೋನಿ ಎರಿಕ್‌ಸನ್ 2009 ಅನ್ನು ನಾಲ್ಕನೇ ತ್ರೈಮಾಸಿಕ ಹಾಗೂ ಸಂಪೂರ್ಣ ವರ್ಷದ ಆರ್ಥಿಕ ಫಲಿತಾಂಶವನ್ನು ಘೋಷಿಸಿದೆ Archived 2010-08-01 ವೇಬ್ಯಾಕ್ ಮೆಷಿನ್ ನಲ್ಲಿ., sonyericsson.com, ೨೨ ಜನವರಿ ೨೦೧೦.
- ↑ ೧೮.೦ ೧೮.೧ ಡಲೇಸಿಯೋ, ಎಮರಿ P. "ಸೋನಿ ಎರಿಕ್‌ಸನ್ ಕ್ಲೋಸಸ್ NC, ಅದರ್ ಸೈಟ್ಸ್ ಆಸ್ HQ ಮೂವ್ಸ್." ಅಸೋಸಿಯೇಟೆಡ್ ಪ್ರೆಸ್. ನವೆಂಬರ್ ೧೮, ೨೦೦೯ ನವೆಂಬರ್ ೧೮, ೨೦೦೯ರಂದು ಪಡೆಯಲಾಗಿದೆ.
- ↑ ಸ್ವಾಟ್ಸ್ಜ್, ಕ್ರಿಸ್ಟಿ E. "ಸೋನಿ ಎರಿಕ್‌ಸನ್ ಮೂವಿಂಗ್ ನಾರ್ಥ್ ಅಮೇರಿಕನ್ HQ ಟು ಅಟ್ಲಾಂಟಾ Archived 2010-02-22 ವೇಬ್ಯಾಕ್ ಮೆಷಿನ್ ನಲ್ಲಿ.." ದ ಅಟ್ಲಾಂಟಾ-ಜರ್ನಲ್ ಕಾನ್‌ಸ್ಟಿಟ್ಯೂಷನ್ . ಬುಧವಾರ ನವೆಂಬರ್ ೧೮, ೨೦೦೯. ನವೆಂಬರ್ ೧೮, ೨೦೦೯ರಂದು ಪಡೆಯಲಾಗಿದೆ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles needing additional references from July 2009
- All articles needing additional references
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- All articles with specifically marked weasel-worded phrases
- Articles with specifically marked weasel-worded phrases from January 2010
- Articles with unsourced statements from January 2010
- Wikipedia articles needing style editing from January 2010
- All articles needing style editing
- Commons link is on Wikidata
- Official website different in Wikidata and Wikipedia
- ಸೋನಿ ಎರಿಕ್‌ಸನ್
- ಬಳಕೆದಾರ/ಉಪಭೋಗೀ ವಿದ್ಯುನ್ಮಾನ ವ್ಯಾಪಾರೀ ಛಾಪುಗಳು
- ಲಂಡನ್ ಮೂಲದ ಕಂಪೆನಿಗಳು
- ಜಂಟಿ ಉದ್ಯಮಗಳು
- ಸಂಚಾರಿ ದೂರವಾಣಿ ತಯಾರಕರು
- ಅಂತರರಾಷ್ಟ್ರೀಯ ಜಂಟಿ-ಉದ್ಯಮ ಕಂಪೆನಿಗಳು
- 2001ರಲ್ಲಿ ಸ್ಥಾಪನೆಯಾದ ಕಂಪನಿಗಳು
- ಉದ್ಯಮ